Reading Time: 2 minutes

ರಕ್ತವನ್ನು ಪರಿಣಾಮಕಾರಿಯಾಗಿ ಪಂಪ್ ಮಾಡಲಾಗದ ಹೃದಯದ ಅಸಮರ್ಥತೆಯಿಂದಾಗಿ ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ, ಹೃದಯದ ಈ ಅಸಮರ್ಥತೆಯನ್ನು ಹೃದಯ ವೈಫಲ್ಯ ಎಂದು ಹೇಳಲಾಗುತ್ತದೆ. ಈ ಸಮಸ್ಯೆಯು ಹೆಚ್ಚಾಗಿ ಹೃದಯದ ಸಮಸ್ಯೆಗಳೊಂದಿಗೆ ಬೆಸೆದುಕೊಂಡಿರುತ್ತದೆ; ಆದರೆ, ಕೆಲವೊಮ್ಮೆ ಕಿಡ್ನಿಗಳು ಕೂಡ ಬಾಧೆಗೊಳಗಾಗುತ್ತವೆ[1]. ಆಹಾರಕ್ರಮ ಮತ್ತು ವ್ಯಾಯಾಮವು ಎಲ್ಲಾ ಬಗೆಯ ಆರೋಗ್ಯ ಸ್ಥಿತಿಗತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೃದಯ ವೈಫಲ್ಯವನ್ನು ಕೂಡ ಹಿಡಿತಕ್ಕೆ ತರಬಹುದಾಗಿದೆ[2]. ನಿಮ್ಮ ಹೃದಯದ ಆರೋಗ್ಯವನ್ನು ಜಾಣ್ಮೆಯಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು, ನೀವು ದಿನ ತೆಗೆದುಕೊಳ್ಳುವ ಆಹಾರವನ್ನು(ಗಳನ್ನು) ಹೇಗೆ ಯೋಜಿಸಬೇಕೆಂದು ಇಲ್ಲಿ ನೀಡಲಾಗಿದೆ.

ನಿಮಗೆ ಬೇಕಾಗಬಹುದಾದ ಪೋಷಕಾಂಶಗಳು

ಸಾಮಾನ್ಯ ಅರಿವು ಮತ್ತು ತಿಳುವಳಿಕೆಯು ಕೊಬ್ಬು, ಉಪ್ಪು ಮತ್ತು ಕೊಲೆಸ್ಟರಾಲ್‌ ಕಡಿಮೆ ಹೊಂದಿರುವ ಆಹಾರಕ್ರಮದ ಕಡೆಗೆ ನಮಗೆ ದಾರಿ ತೋರುತ್ತದೆ. ಆದರೆ, ಈಗಿನ ಪರಿಸ್ಥಿತಿಯು ಬರಿ ಅದಷ್ಟಕ್ಕೇನೆ ಸೀಮಿತವಾಗಿಲ್ಲ. ಹೃದಯ ವೈಫಲ್ಯದ ರೋಗಿಗಳಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಮ್‌ನ ಸಾಧಾರಣ ಕೊರತೆ ಕಂಡುಬಂದಿದೆ. ಅಷ್ಟೆಯಲ್ಲದೆ ಜಿಂಕ್, ಸೆಲೆನಿಯಂ ಮತ್ತು ಥಯಾಮಿನ್‌ನಂತಹ ಇತರೆ ಸೂಕ್ಷ್ಮ ಪೋಷಕಾಂಶಗಳ ಪ್ರಮಾಣವು, ಹೃದಯ ವೈಫಲ್ಯತೆ ಹೊಂದಿರುವ ರೋಗಿಗಳಲ್ಲಿ ಕಡಿಮೆ ಆಗಿರುವುದು ಕಂಡುಬಂದಿದೆ. ವಿವಿಧ ಅಗತ್ಯ ಪೋಷಕಾಂಶಗಳ ಪೈಕಿ, ಕ್ಯಾಲ್ಸಿಯಂ, ವಿಟಮಿನ್ ಡಿ, ಮೆಗ್ನೀಶಿಯಂ, ಸೆಲೆನಿಯಮ್ ಮತ್ತು ಜಿಂಕ್, ಹೃದಯ ವೈಫಲ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ[2].

ಆಹಾರಕ್ರಮದ ಮಾರ್ಪಾಡುಗಳು

ನಿಮ್ಮ ದೇಹದ ಬೇಕುಗಳನ್ನು ಪೂರೈಸಲು ನೀವು ದಿನ ತೆಗೆದುಕೊಳ್ಳುವ ಆಹಾರದಲ್ಲಿ ಮಾಡಿಕೊಳ್ಳಬೇಕಾದ ಕೆಲವು ಸುಲಭ ಮಾರ್ಪಾಡುಗಳನ್ನು ಕೆಳಗೆ ನೀಡಲಾಗಿದೆ[1]:

  • ಉಪ್ಪನ್ನು ಕಡಿಮೆ ಮಾಡಿ:  ಅಡುಗೆ ಮಾಡುವಾಗ ಕಡಿಮೆ ಉಪ್ಪನ್ನು ಬಳಸುವುದು ಅಷ್ಟೇ ಅಲ್ಲದೆ, ಅಡುಗೆಗೆ ಬಳಸುವ ಆಹಾರ ಪದಾರ್ಥಗಳಲ್ಲಿ ಎಷ್ಟು ಉಪ್ಪಿದೆ ಮತ್ತು ಅವುಗಳನ್ನು ಹೇಗೆ ಬೇಯಿಸಬೇಕು ಎಂಬುದರ ಬಗ್ಗೆ ಕೂಡ ತಿಳಿದಿರಬೇಕು. ಹಾಲಿನ ಉತ್ಪನ್ನಗಳು, ಮೊಟ್ಟೆ, ದ್ವಿದಳ ಧಾನ್ಯಗಳು, ತಾಜಾ ಮಾಂಸ ಮತ್ತು ಮೀನುಗಳು ಕಡಿಮೆ ಉಪ್ಪಿನಂಶವಿರುವ ಆಹಾರಗಳಾಗಿವೆ. ನೀವು ತಿನ್ನುವ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಲು, ನಿಮ್ಮ ಆಹಾರವನ್ನು ಬೇಯಿಸಿಯೋ, ಹುರಿದೋ, ಗ್ರಿಲ್ ಮಾಡಿಯೋ, ಪೋಚ್ ಅಥವಾ ಸ್ಟೀಮ್ ಮಾಡಿಯೋ ಅಡುಗೆ ಮಾಡಬೇಕೆಂದು ಸೂಚಿಸಲಾಗುತ್ತದೆ. ಅಕ್ಕಿ, ಪಾಸ್ತಾ ಅಥವಾ ಧಾನ್ಯಗಳನ್ನು ಬೇಯಿಸುವಾಗ ಅಥವಾ ಕುದಿಸುವಾಗ ನೀರಿಗೆ ಉಪ್ಪು ಹಾಕುವುದನ್ನು ತಪ್ಪಿಸಿ. ಉಪ್ಪನ್ನು ಕಡಿಮೆ ಮಾಡಿಕೊಳ್ಳಲು ಮತ್ತೊಂದು ಸರಳ ವಿಧಾನವೆಂದರೆ ಗಿಡಮೂಲಿಕೆ, ಬೆಳ್ಳುಳ್ಳಿ, ಸಿಟ್ರಿಕ್ ಪಾನೀಯ ಮತ್ತು ಈರುಳ್ಳಿಯಂತಹ ಇತರೆ ಮಸಾಲೆ ಪದಾರ್ಥಗಳನ್ನು ಬಳಸುವುದು. ಮನೆಯಲ್ಲಿ ಅಥವಾ ಹೊರಗೆ ಊಟ ಮಾಡುವಾಗ, ಊಟದ ರುಚಿಯನ್ನು ಹೆಚ್ಚಿಸಿಕೊಳ್ಳಲು ಉಪ್ಪಿನಂಶ ಹೆಚ್ಚಿರುವ ಉಪ್ಪಿನಕಾಯಿ, ಮಸ್ಟರ್ಡ್‌ ಸಾಸ್ ಅಥವಾ ಟಾರ್ಟರ್ ಸಾಸ್‌ನಂತಹ ಕಾಂಡಿಮೆಂಟ್ಸ್ ಮತ್ತು ಸಾಸ್‌ಗಳನ್ನು ಹಾಕಿಕೊಳ್ಳಬೇಡಿ. ಬದಲಿಗೆ, ನಿಮ್ಮ ಆಹಾರದ ಸ್ವಾದವನ್ನು ಹೆಚ್ಚಿಸಿಕೊಳ್ಳಲು ಈರುಳ್ಳಿ, ಲೆಟಿಸ್ ಮತ್ತು ಟೊಮ್ಯಾಟೊವನ್ನು ಬಳಸಿ. ಹೊರಗಡೆ ಊಟ ಮಾಡುವಾಗ, ಊಟಕ್ಕೆ ಕಡಿಮೆ ಉಪ್ಪು ಹಾಕುವಂತೆ ಅಥವಾ ಮೊನೊಸೋಡಿಯಂ ಗ್ಲುಟಮೇಟನ್ನು (ಎಂಎಸ್‌ಜಿ) ಹಾಕದಿರುವಂತೆ ಅಡುಗೆ ಮಾಡುವವರಿಗೆ ಕೇಳಿಕೊಳ್ಳಿ.
  • ತಾಜಾ ಪದಾರ್ಥ ಸೇವಿಸಿ: ಹಣ್ಣು ಮತ್ತು ತರಕಾರಿಗಳಂತಹ ತಾಜಾ ಆಹಾರಗಳಿಗೆ ಯಾವುದೇ ಮಸಾಲೆ ಅಗತ್ಯವಿರುವುದಿಲ್ಲ ಹಾಗೂ ಅವುಗಳನ್ನು ಹಾಗೆಯೇ ತಿನ್ನಬಹುದಾಗಿದೆ. ಅವುಗಳನ್ನು ಕೂಡ ಹಲವಾರು ರೀತಿಯಲ್ಲಿ ತಿನ್ನಬಹುದಾಗಿದ್ದು, ಕೆಲವು ಗಿಡಮೂಲಿಕೆಗಳನ್ನು ಸೇರಿಸುವುದರ ಮೂಲಕ ರುಚಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಅಷ್ಟೆಯಲ್ಲದೆ, ಇವು ನಿಮ್ಮ ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳನ್ನು ಸುಲಭವಾಗಿ ಒದಗಿಸುತ್ತವೆ.
  • ಲೇಬಲ್‌ಗಳನ್ನು ನೋಡಿ: ಆಹಾರವನ್ನು ಖರೀದಿಸುವಾಗ ಆಹಾರದಲ್ಲಿರುವ ಅಂಶಗಳನ್ನು ಮತ್ತು ಲೇಬಲ್‌ಗಳನ್ನು ನೋಡುವುದರ ಮೂಲಕ ನಿಮ್ಮ ಆಹಾರ ಅಭ್ಯಾಸ ಮತ್ತು ಆಯ್ಕೆಗಳ ಮೇಲೆ ನಿಗಾವಹಿಸಬಹುದಾಗಿದೆ. ನೀವು ಆಯ್ಕೆ ಮಾಡಿಕೊಳ್ಳುವ ಯಾವುದೇ ಆಹಾರದಲ್ಲಿಯೂ 350 ಮಿಲಿಗ್ರಾಂ ಗಿಂತ ಹೆಚ್ಚು ಸೋಡಿಯಂ ಇರದಂತೆ ನೋಡಿಕೊಳ್ಳಿ. ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ನಿಮ್ಮ ಆಹಾರದಲ್ಲಿರಬೇಕು. ಕ್ಯಾಲರಿ ಪ್ರಮಾಣ ಸೇರಿದಂತೆ ಪ್ರೋಟೀನ್, ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬಿನಂಶವನ್ನು ಆಹಾರದ ಪ್ಯಾಕೇಜಿಂಗ್‌ನಲ್ಲಿ ಯಾವಾಗಲೂ ನೋಡಿ.

ಬುದ್ಧಿವಂತಿಕೆಯಿಂದ ತಿನ್ನುವುದು ಎಂದರೆ ರುಚಿಕರವಾದ ಆಹಾರವನ್ನು ತಿನ್ನಬಾರದು ಎಂದಲ್ಲ, ಹಾಗೂ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೊರಗಡೆ ಊಟ ಮಾಡುವ ಆನಂದವನ್ನು ಕಳೆದುಕೊಳ್ಳಬೇಕು ಅಂತಲೂ ಅಲ್ಲ. ನಿಮ್ಮ ರುಚಿ ಮೊಗ್ಗುಗಳನ್ನು ಸಮಾಧಾನಪಡಿಸಿ, ನಿಮ್ಮ ಹೃದಯಕ್ಕೆ ಸಂತೋಷವನ್ನು ತಂದುಕೊಡುವ ಆರೋಗ್ಯಕರವಾದ ಮತ್ತು ಬಾಯಲ್ಲಿ ನೀರು ತರಿಸುವಂತಹ ಆಹಾರಗಳನ್ನು ಮಾಡಿಕೊಳ್ಳಲು ಅಥವಾ ಆರ್ಡರ್ ಮಾಡಲು ಕೆಲವು ಸರಳವಾದ ಸಲಹೆಗಳು ನಿಮಗೆ ನೆರವಾಗುತ್ತವೆ.

References:

  1. University of California San Francisco. Diet and congestive heart failure [Internet]. [cited Jan 8 2020]. Available from: https://www.ucsfhealth.org/education/diet-and-congestive-heart-failure.
  2. Rothberg MB, Sivalingam SK. The New Heart Failure Diet: Less Salt Restriction, More Micronutrients. Journal of General Internal Medicine [Internet]. 2010 Oct 1 [cited 2020 Jan 30];25(10):1136–1137. Available from: https://www.ncbi.nlm.nih.gov/pmc/articles/PMC2955483/

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.