ದೇಹದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸದಾಕಾಲ ರಕ್ತವನ್ನು ಪಂಪ್ ಮಾಡುವುದು ಹೃದಯದ ಕೆಲಸವಾಗಿದೆ. ಈ ಪ್ರಕ್ರಿಯೆಯು ರಕ್ತದೊತ್ತಡದ ಸಹಾಯದಿಂದ ಆಗುತ್ತದೆ. ರಕ್ತವು ಹರಿಯುವಾಗ ಆರ್ಟರಿ ಗೋಡೆಗಳ ಮೇಲೆ ಬೀಳುವ ಒತ್ತಡಕ್ಕೆ ರಕ್ತದೊತ್ತಡ ಎನ್ನಲಾಗುತ್ತದೆ. ಹೃದಯದಿಂದ ರಕ್ತನಾಳಗಳಿಗೆ ರಕ್ತವನ್ನು ಪಂಪ್ ಮಾಡಿದಾಗ ಉಂಟಾಗುವ ಪ್ರತಿ ಎದೆಬಡಿತವು ಒತ್ತಡವನ್ನು ಹುಟ್ಟುಹಾಕುತ್ತದೆ[1].
ಹೈಪರ್‌ಟೆನ್ಶನ್ ಎಂದರೇನು?
ಹೈಪರ್‌ಟೆನ್ಶನ್ ಒಂದು ಸಮಸ್ಯೆಯಾಗಿದ್ದು, ಇದನ್ನು ಸರಳವಾಗಿ ಅಧಿಕ ರಕ್ತದೊತ್ತಡ ಎಂದು ಹೇಳಬಹುದು. ವೈದ್ಯಕೀಯ ಮಾನದಂಡಗಳ ಪ್ರಕಾರ, ಒಬ್ಬ ವ್ಯಕ್ತಿಯು ಸತತ ಮೂರು ಬಾರಿ 130/80 mmHg ಗಿಂತಲೂ ಹೆಚ್ಚು ರೀಡಿಂಗ್ ಹೊಂದಿದ್ದರೆ, ಆತ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾನೆ ಎಂದು ಗುರುತಿಸಬಹುದು.
ಅಧಿಕ ರಕ್ತದೊತ್ತಡವು ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಬೊಜ್ಜುತನ, ಧೂಮಪಾನ, ಕೌಟುಂಬಿಕ ಹಿನ್ನಡವಳಿ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ.
ಇದು ಹೃದ್ರೋಗಕ್ಕೆ ಹೇಗೆ ತಳಕು ಹಾಕಿಕೊಂಡಿದೆ?
ಅಧಿಕ ರಕ್ತದೊತ್ತಡವು ಹೃದಯ ವೈಫಲ್ಯಕ್ಕೆ ಎಡೆ ಮಾಡಿಕೊಡಬಹುದು. ರಕ್ತದೊತ್ತಡವು ಹೆಚ್ಚಾದಾಗ, ರಕ್ತನಾಳಗಳ ತಡೆ ಮತ್ತು ಕಿರಿದಾಗುವಿಕೆಗೆ ಕಾರಣವಾಗಿ, ಹೃದಯ ವೈಫಲ್ಯದ ಸಾಧ್ಯತೆ ಹೆಚ್ಚಾಗುತ್ತದೆ[2]. ಅಧಿಕ ರಕ್ತದೊತ್ತಡವು ಹೃದಯದ ಮೇಲೆ ನಾನಾ ರೀತಿಯಲ್ಲಿ ಪರಿಣಾಮ ಬೀರಬಹುದಾಗಿದ್ದು, ಲೆಫ್ಟ್ ವೆಂಟ್ರಿಕ್ಯುಲರ್ ಹೈಪರ್‌ಟ್ರಫಿ (ಎಲ್‌ವಿಎಚ್) ಗೂ ಕಾರಣವಾಗಬಹುದು[3]. ಹೃದಯ ಮಾಡಲ್ಪಟ್ಟಿರುವ ಸ್ನಾಯುಗಳು ಗಡುಸಾಗಿ, ಎದೆಬಡಿತದ ನಡುವಿನ ಸ್ನಾಯು ಸಡಿಲತೆ ಸರಿಯಾಗಿ ಆಗದಿರುವ ಸನ್ನಿವೇಶವನ್ನು ಎಲ್‌ವಿಎಚ್ ಎನ್ನುವರು. ಇದು ನಿಮ್ಮ ಪ್ರಮುಖ ಅಂಗಗಳಿಗೆ ಪೂರೈಕೆಯಾಗುವ ಆಮ್ಲಜನಕದ ಪ್ರಮಾಣವನ್ನು ಕಡಿಮೆಯಾಗಿಸುತ್ತದೆ, ವಿಶೇಷವಾಗಿ ಶ್ರಮಪಡುವ ವೇಳೆ. ಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ದೇಹವು ದ್ರವಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ.
ಅದನ್ನು ಹೇಗೆ ನಿಭಾಯಿಸುವುದು?
ಇದನ್ನು ನಿಭಾಯಿಸಲು ಇರುವ ಏಕೈಕ ಮಾರ್ಗವೆಂದರೆ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವುದು ಅಥವಾ ಕಡಿಮೆ ಮಾಡಿಕೊಳ್ಳುವುದು. ಹೃದಯರಕ್ತನಾಳದ ಥೆರಪಿಯ, ತಜ್ಞರ ವಿಮರ್ಶೆಯಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ‘ರಕ್ತದೊತ್ತಡದಲ್ಲಿನ ಇಳಿಕೆಯು ರೋಗದ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ, ಹಾಗೂ ಮುಂಚಿತ ಚಿಕಿತ್ಸೆಯು ಮುಂದಾಗಬಹುದಾದ ಹೃದಯ ವೈಫಲ್ಯ ಮತ್ತು ಪಾರ್ಶ್ವವಾಯುವನ್ನು ತಪ್ಪಿಸುತ್ತದೆ.’[3]
References:
- High Blood Pressure/Hypertension [Internet]. John Hopkins Medicine. 2020 [cited 2020 Apr 28]. Available from: https://www.hopkinsmedicine.org/health/conditions-and-diseases/high-blood-pressure-hypertension
- How High Blood Pressure Can Lead to Heart Failure [Internet]. www.heart.org. 2016. Available from: https://www.heart.org/en/health-topics/high-blood-pressure/health-threats-from-high-blood-pressure/how-high-blood-pressure-can-lead-to-heart-failure
- Subramaniam V, Lip GY. Hypertension to heart failure: a pathophysiological spectrum relating blood pressure, drug treatments and stroke. Expert Rev Cardiovasc Ther. 2009 Jun;7(6):703-13. doi: 10.1586/erc.09.43. PubMed PMID: 19505285.
- Kjeldsen SE. Hypertension and cardiovascular risk: General aspects. Pharmacol Res. 2018 Mar;129:95-99. doi: 10.1016/j.phrs.2017.11.003. Epub 2017 Nov 7. Review. PubMed PMID: 29127059.
- Hypertension and cardiovascular risk: General aspects. Kjeldsen SE. Pharmacol Res. 2018 Mar;129:95-99. doi: 10.1016/j.phrs.2017.11.003. Epub 2017 Nov 7. Review.