tips-reduce-heart-attack-risk
Reading Time: 2 minutes

ಅಪಧಮನಿಯ ಗೋಡೆಗಳ ಮೇಲೆ ಕೊಲೆಸ್ಟರಾಲ್ ಮತ್ತು ಕೊಬ್ಬುಗಳು ಶೇಖರಣೆ ಆಗಿ ಹೆಪ್ಪುಗಟ್ಟಿಕೊಳ್ಳುವುದರಿಂದ ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೆ ಹೃದಯಾಘಾತ ಸಂಭವಿಸುತ್ತದೆ. ಡಯಾಬಿಟಿಸ್ ಮತ್ತು ರಕ್ತದೊತ್ತಡದಂತಹ ಹಲವಾರು ಅಪಾಯಕಾರಿ ಅಂಶಗಳು ಸಹ ಅಪಧಮನಿಯ ತಡೆಗಟ್ಟುವಿಕೆಗೆ ಕಾರಣವಾಗಿವೆ, ಇದು ಹೃದಯಾಘಾತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹೃದಯಾಘಾತವು ಮಾರಕವಾಗಿದ್ದರೂ, ಸರಳ ಜೀವನಶೈಲಿಯ ಮಾರ್ಪಾಡುಗಳು ಅದು ಪುನಃ ಮರುಕಳಿಸುವ ಸಾಧ್ಯತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಹೃದಯಾಘಾತದ ಅಪಾಯವನ್ನು ತಡೆಯಲು ನಿಮ್ಮ ಜೀವನದಲ್ಲಿ ನೀವು ಮಾಡಬಹುದಾದ 6 ಆರೋಗ್ಯಕರ ಬದಲಾವಣೆಗಳು ಇಲ್ಲಿವೆ.

1. ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸುವುದು:

AIIMS ಹೃದ್ರೋಗ ತಜ್ಞ, ಡಾ.ಸಂದೀಪ್ ಮಿಶ್ರಾ ಹೇಳುತ್ತಾರೆ, “ಆರೋಗ್ಯಕರ ಆಹಾರಕ್ರಮವು ಸಾಕಷ್ಟು ಹಣ್ಣು, ತರಕಾರಿ, ಬೀಜಗಳು, ಬೇಳೆಕಾಳುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು, ಧಾನ್ಯಗಳು ಮತ್ತು ಮೀನುಗಳಂತಹ ಆಹಾರ ಪದಾರ್ಥಗಳನ್ನು ಒಳಗೊಂಡಿರುವುದೇ ಹೊರತು ಶುದ್ಧೀಕರಿಸಿದ, ಸಂಸ್ಕರಿಸಿದ, ಮತ್ತು ಜಂಕ್ ಆಹಾರ ಪದಾರ್ಥಗಳನ್ನಲ್ಲ.” ಪ್ಯಾಕ್ ಮಾಡಲಾದ ಈ ಆಹಾರಗಳಲ್ಲಿ ಹೆಚ್ಚಿನ ಸಕ್ಕರೆ, ಕೊಬ್ಬು, ಉಪ್ಪು ಮತ್ತು ಸಂರಕ್ಷಕ ಅಂಶವಿರುತ್ತದೆ. ಇದು ಬೊಜ್ಜು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್ ಮತ್ತು ಡಯಾಬಿಟಿಸ್‌ನಂತಹ ಅಪಾಯಕಾರಿ ಅಂಶಗಳಿಗೆ ಸಹಾಯ ಮಾಡುವ ಮೂಲಕ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

2. ವ್ಯಾಯಾಮ:

ಹೃದಯರಕ್ತನಾಳಗಳ ಫಿಟ್ನೆಸ್ ಸುಧಾರಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ವ್ಯಾಯಾಮವನ್ನು ಶಿಫಾರಸು ಮಾಡಿದೆ. ವಾಕಿಂಗ್, ಈಜುವುದು ಅಥವಾ ಸೈಕ್ಲಿಂಗ್ ಮಾಡುವುದು ನಿಮ್ಮ ವ್ಯಾಯಾಮ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಅತ್ಯಂತ ಪ್ರಯೋಜನಕಾರಿಯಾದ ಸರಳ ವ್ಯಾಯಾಮಗಳು.

3. ಧೂಮಪಾನವನ್ನು ತ್ಯಜಿಸಿ:

ತಂಬಾಕು ಯಾವ ರೂಪದಲ್ಲಿ ಇದ್ದರೂ ಅದು ಅಪಾಯಕಾರಿ. ಅದು ಸಿಗರೇಟ್, ಸಿಗಾರ್ ಅಥವಾ ಅಗಿಯುವ ರೂಪದಲ್ಲೇ ಇರಲಿ ಎಲ್ಲಾ ರೀತಿಯಲ್ಲೂ ಅದರಿಂದ ಒಳಿತಿಲ್ಲ. ತಂಬಾಕು ಉತ್ಪನ್ನ ಬಳಸುವುದನ್ನು ನಿಲ್ಲಿಸಿದವರಲ್ಲಿ ಹೃದಯಾಘಾತದ ಅಪಾಯವು 50% ಕಡಿಮೆಯಾಗಿದೆ ಎಂದು ಅಧ್ಯಯನಗಳು ವರದಿ ಮಾಡಿವೆ. ಹಾಗಾಗಿ, ಧೂಮಪಾನವನ್ನು ತ್ಯಜಿಸುವುದರಿಂದ ನಿಮ್ಮ ಹೃದಯಾಘಾತದ ಅಪಾಯವನ್ನು ಅರ್ಧದಷ್ಟು ನೀವು ಕಡಿಮೆ ಮಾಡುವ ಸಾಧ್ಯತೆಯಿದೆ.

4. ಆಲ್ಕೊಹಾಲ್ ಸೇವನೆಯನ್ನು ಮಿತಿಗೊಳಿಸಿ:

ಯಾವುದೇ ಆಗಲಿ, ಅದು ಮಿತಿಮೀರಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಲ್ಕೊಹಾಲ್ ವಿಷಯದಲ್ಲಿ ಇದು ನೂರಕ್ಕೆ ನೂರರಷ್ಟು ನಿಜ. ನೆನಪಿಡಿ, ಆಲ್ಕೋಹಾಲ್ ವಿಷಯದಲ್ಲಿ ಅದನ್ನು ಮಿತವಾಗಿ ಸೇವಿಸುವುದು ತುಂಬ ಮುಖ್ಯ. ಕಡಿಮೆ ಕುಡಿಯುವವರಲ್ಲಿ ಹೃದಯಾಘಾತದ ಅಪಾಯವು 11% ಕಡಿಮೆಯಾಗಿದೆ ಎಂದು ಅಧ್ಯಯನಗಳು ವರದಿ ಮಾಡಿವೆ. ಹಾಗಾಗಿ, ನಿಮ್ಮ ವೈಯಕ್ತಿಕ ಗುರಿಗಳು ಹೇಗಿರಬೇಕು ಎಂಬುದನ್ನು ನಿಮ್ಮ ವೈದ್ಯರೊಂದಿಗೆ ತಪ್ಪದೇ ವಿಚಾರ ಮಾಡುತ್ತಿರಿ.

5. ಒತ್ತಡವನ್ನು ನಿರ್ವಹಿಸಿ:

ದೈನಂದಿನದ ಗಡಿಬಿಡಿ ಮತ್ತು ಹೆಚ್ಚುತ್ತಿರುವ ಕೆಲಸದ ಒತ್ತಡವು ಹೃದಯಾಘಾತದ ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ. ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ಕಾರ್ಟಿಸೋಲ್ ಎಂಬ ಹಾರ್ಮೋನ್ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟರಾಲ್ ಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ, ಇದರಿಂದಾಗಿ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಯೋಗ ಅಥವಾ ಧ್ಯಾನವನ್ನು ಅಭ್ಯಾಸ ಮಾಡಲು ಡಾ. ಮಿಶ್ರಾ ಸೂಚಿಸಿದ್ದಾರೆ. “ಆರೋಗ್ಯಕರ ಜೀವನವನ್ನು ನಡೆಸಲು ಕೆಲಸ ಮತ್ತು ಜೀವನದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ತುಂಬ ಮುಖ್ಯ.” ಎಂದು ಅವರು ಹೇಳುತ್ತಾರೆ.

6. ನಿಮ್ಮ ಆರೋಗ್ಯದ ಮೇಲೆ ನಿಗಾವಹಿಸಿ:

ಅಪಾಯಕಾರಿ ಅಂಶಗಳ ನಿಯಮಿತ ಮೌಲ್ಯಮಾಪನವು ಹೃದಯಾಘಾತವನ್ನು ತಡೆಗಟ್ಟುವ ಪ್ರಮುಖ ಅಂಶವಾಗಿದೆ. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಿ ಅದನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲು ನಿಮ್ಮ ಸಕ್ಕರೆ ಮಟ್ಟ, ಕೊಲೆಸ್ಟರಾಲ್ ಮಟ್ಟ ಮತ್ತು ರಕ್ತದೊತ್ತಡದ ಮಟ್ಟಗಳ ಬಗ್ಗೆ ನೀವು ತಿಳಿದಿರಬೇಕು. ಈ ಯಾವುದೇ ಮಟ್ಟಗಳು ಹೆಚ್ಚಾಗಿದ್ದಲ್ಲಿ, ಇತರ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೊದಲು ಅವುಗಳನ್ನು ನಿಯಂತ್ರಿಸಲು ನೀವು ಔಷಧಿಗಳನ್ನು ತೆಗೆದುಕೊಳ್ಳಬೇಕಾಗಬಹುದು.

ರಕ್ತದೊತ್ತಡ, ಕೊಲೆಸ್ಟರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಅದರ ಮೇಲ್ವಿಚಾರಣೆ ಮಾಡಬೇಕು. ಜೊತೆಗೆ ಹೃದಯಾಘಾತವನ್ನು ತಡೆಗಟ್ಟುವಲ್ಲಿ ಆಹಾರ, ವ್ಯಾಯಾಮ ಮತ್ತು ತಂಬಾಕನ್ನು ತ್ಯಜಿಸುವುದು ಮೂರು ಪ್ರಮುಖ ಅಂಶಗಳು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಗುರುತಿಸಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜೀವನಶೈಲಿಯ ಬದಲಾವಣೆಗಳು ಹೃದಯಾಘಾತದ ಅಪಾಯವನ್ನು 80% ರಷ್ಟು ಕಡಿಮೆ ಮಾಡುತ್ತದೆ.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.