Reading Time: 2 minutes

ಡಯಾಬಿಟಿಸ್ ಇರುವ ಪುರುಷರಲ್ಲಿ ನಿಮಿರುವಿಕೆಯ ನಿಷ್ಕ್ರಿಯತೆ ಒಂದು ಸಾಮಾನ್ಯ ಸಮಸ್ಯೆ – ಆದರೆ ಇದು ಅನಿವಾರ್ಯವಲ್ಲ. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವಾಗ, ಶಿಶ್ನವು ಲೈಂಗಿಕತೆಯನ್ನು ಹೊಂದುವಷ್ಟು ಗಟ್ಟಿಯಾಗಿ ನಿಮಿರದೇ ಇರುವುದನ್ನು ನಿಮಿರುವಿಕೆಯ ನಿಷ್ಕ್ರಿಯತೆ ಎಂದು ಕರೆಯಲಾಗುತ್ತದೆ. ಬಹುಕಾಲದಿಂದ ನಿಯಂತ್ರಣದಲ್ಲಿರದ ರಕ್ತದಲ್ಲಿನ ಸಕ್ಕರೆ ಮಟ್ಟವು ನರಗಳಿಗೆ ಹಾನಿ ಮಾಡುತ್ತದೆ ಹಾಗೂ ಡಯಾಬಿಟಿಸ್‌ ಹೊಂದಿರುವ ಪುರುಷರಲ್ಲಿ ನಿಮಿರುವಿಕೆಯ ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಇತರ ತೊಂದರೆಗಳಿಗೆ ಕೂಡ ಸಂಬಂಧಿಸಿದೆ. ಡಯಾಬಿಟಿಸ್‌ ಇಲ್ಲದ ಪುರುಷರಿಗೆ ಹೋಲಿಸಿದರೆ ಡಯಾಬಿಟಿಸ್‌ ಇರುವ ಪುರುಷರಲ್ಲಿ ಇದು ಬೇಗನೆ ಕಾಣಿಕೊಳ್ಳುವ ಸಾಧ್ಯತೆ ಇದೆ.

ಇದು ನಿಮಗೆ ಸವಾಲೊಡ್ಡಿ, ನಿಮ್ಮನ್ನು ನಿರಾಶೆಗೊಳಪಡಿಸಬಹುದು, ಆದರೆ ಚಿಂತಿಸಬೇಡಿ. ಹೀಗಾಗಲು ಕಾರಣಗಳೇನು ಹಾಗೂ ಇದರಿಂದ ಪಾರಾಗಿ ಹಿಂದಿನ ಉತ್ಸಾಹವನ್ನು ಮತ್ತೆ ಪಡೆಯುವುದು ಹೇಗೆ ಎಂಬುದನ್ನು ತಿಳಿಯೋಣ. ನಮ್ಮ ಡಯಾಬಿಟಿಸ್ ಕೇರ್ ಎಕ್ಸ್‌ಪರ್ಟ್, ಸಂಪದ ಕುಲಕರ್ಣಿರವರು, ನಿಮಿರುವಿಕೆಯ ನಿಷ್ಕ್ರಿಯತೆಯನ್ನು ನಿಭಾಯಿಸುವ ಹಂತಗಳನ್ನು ತಿಳಿಸಿಕೊಡಲಿದ್ದು, ಇದು ನಿಮ್ಮ ಲೈಂಗಿಕ ಜೀವನವನ್ನು ಮತ್ತೆ ಟ್ರ್ಯಾಕ್‌ಗೆ ತರಲು ಸಹಾಯ ಮಾಡುತ್ತದೆ. 

ನಿಮಿರುವಿಕೆಯ ನಿಷ್ಕ್ರಿಯತೆ ಎಂದರೇನು?

ನಿಮಿರುವಿಕೆಯ ನಿಷ್ಕ್ರಿಯತೆಯು ರಕ್ತಪರಿಚಲನೆ ಮತ್ತು ನರಮಂಡಲಕ್ಕೆ ಸಂಬಂಧಿಸಿರುವುದಾಗಿದೆ. ಹಿಡಿತದಲ್ಲಿಡಲಾಗದ ರಕ್ತದಲ್ಲಿನ ಸಕ್ಕರೆ ಮಟ್ಟವು ನರಗಳಿಗೆ ಹಾಗೂ ಸಣ್ಣ ರಕ್ತನಾಳಗಳಿಗೆ ಹಾನಿಯುಂಟು ಮಾಡಬಲ್ಲದು. ಲೈಂಗಿಕ ಪ್ರಚೋದನೆ ಮತ್ತು ಪ್ರತಿಕ್ರಿಯೆಯನ್ನು ನಿರ್ವಹಿಸುವ ನರಗಳು ಹಾನಿಗೊಳಗಾದಾಗ, ಸಂಭೋಗ ನಡೆಸಲು ಬೇಕಾಗುವಷ್ಟು ಬಿಗಿಯಾದ ನಿಮಿರುವಿಕೆಯನ್ನು ಹೊಂದುವ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಅಧಿಕ ರಕ್ತದೊತ್ತಡವೂ ಸಹ ಇದರ ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಇದು ಆರ್ಟರಿಯನ್ನ ಕಿರಿದಾಗಿಸುವ ಮೂಲಕ, ನರಗಳ ಹಾನಿಗೆ ಕಾರಣವಾಗಿ, ಶಿಶ್ನಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡಿ, ನಿಮಿರುವಿಕೆಯ ನಿಷ್ಕ್ರಿಯತೆಗೆ ಕಾರಣವಾಗುತ್ತದೆ. 

ನಿಮಿರುವಿಕೆಯ ನಿಷ್ಕ್ರಿಯತೆ ಉಲ್ಬಣವಾಗಲು ಬಿಡಬೇಡಿ

ನಿಮ್ಮ ಜೀವನಶೈಲಿಯ ಆಯ್ಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದು ಬಹಳ ಸಹಾಯಕಾರಿಯಾಗಿರುತ್ತದೆ. ಸಣ್ಣ ಬದಲಾವಣೆಗಳಿಂದ ಪಡೆಯಬಹುದಾದ ಪ್ರಯೋಜನಗಳನ್ನು ಕಡೆಗಣಿಸುವಂತಿಲ್ಲ. ನಿಮಿರುವಿಕೆಯ ನಿಷ್ಕ್ರಿಯತೆಯನ್ನು ಮತ್ತು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಈ ತಂತ್ರಗಳನ್ನು ಪ್ರಯತ್ನಿಸಿ.

  • ನಿರ್ಲಕ್ಷ್ಯ ಮಾಡಬೇಡಿ, ಮಾತನಾಡಿ: ಸಂಕೋಚ ಬೇಡ. ನೀವು ಮಾಡಬೇಕಿರುವ ಮೊದಲ ಕೆಲಸ, ಅದನ್ನು ನಿರ್ಲಕ್ಷ್ಯ ಮಾಡದಿರುವುದು. ನಿಮ್ಮ ಡಾಕ್ಟರ್‌ ನೊಂದಿಗೆ ಮಾತನಾಡಿ. ಸಮಸ್ಯೆಯನ್ನು ಗುರುತಿಸಿ ನಿಮಗೆ ಮಾರ್ಗದರ್ಶನ ನೀಡಲು ಅವರು ಸೂಕ್ತ ವ್ಯಕ್ತಿಯಾಗಿದ್ದಾರೆ. ನಿಮಿರುವಿಕೆಯ ನಿಷ್ಕ್ರಿಯತೆಯ ಮೂಲ ಕಾರಣಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಅದಕ್ಕೆ ತಕ್ಕ ಚಿಕಿತ್ಸೆಗಳನ್ನು ಮತ್ತು ಔಷಧಿಗಳನ್ನು ನಿಮ್ಮ ಡಾಕ್ಟರ್‌ ನಿಮಗೆ ಸೂಚಿಸುತ್ತಾರೆ. ನಿಮಗಿರುವ ಆಯ್ಕೆಗಳನ್ನು ಗುರುತಿಸಿ!

ನಿಮ್ಮ ಡಯಾಬಿಟಿಸನ್ನು ನಿರ್ವಹಿಸಲು ನೀವು ಸರಿಯಾದ ಕ್ರಮಗಳನ್ನು ಅನುಸರಿಸುತ್ತಿದ್ದೀರಾ ಎಂದು ನಿಮ್ಮ ಡಾಕ್ಟರ್‌ ಬಳಿ ವಿಚಾರಿಸಿ. ನಿಮಿರುವಿಕೆಯ ನಿಷ್ಕ್ರಿಯತೆಯನ್ನು ಉಂಟುಮಾಡುವ ಅಥವಾ ಅದನ್ನು ಉಲ್ಬಣಿಸುವ ಇತರೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿರುವುದು ಅಸಹಜವಲ್ಲ. ಬೇರೆ ಆರೋಗ್ಯ ಸಮಸ್ಯೆಗಳಿದ್ದರೆ ಅವುಗಳನ್ನು ಕೂಡ ಗುಣಪಡಿಸಿಕೊಳ್ಳಲು ಮರೆಯದಿರಿ.

  • ಚಟುವಟಿಕೆಯಿಂದಿರಿ: ಇದು ನಿಮಗೆ ಬೇಸರ ಎನಿಸಬಹುದು, ಆದರೆ ಕೇವಲ 30 ನಿಮಿಷಗಳ ಚಟುವಟಿಕೆ ಭರಿತ ಸಮಯ ಬಹಳಷ್ಟು ಪ್ರಯೋಜನಗಳು ಹೊಂದಿದೆ. ಜಡ ಜೀವನಶೈಲಿಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಅಸ್ಥಿರತೆಗೆ ಕಾರಣವಾಗಬಹುದು, ಇದು ನಿಮಿರುವಿಕೆಯ ನಿಷ್ಕ್ರಿಯತೆ ಕಾರಣವಾಗುತ್ತದೆ. ನಿಯಮಿತವಾದ ವ್ಯಾಯಾಮವು, ಜನನಾಂಗದ ಪ್ರದೇಶವನ್ನೂ ಒಳಗೊಂಡಂತೆ ದೇಹದಾದ್ಯಂತ ರಕ್ತದ ಹರಿವಿಗೆ ಸಹಾಯ ಮಾಡುತ್ತದೆ.
  • ಅಗತ್ಯವಿದ್ದರೆ ಹೆಚ್ಚುವರಿ ತೂಕವನ್ನು ಇಳಿಸಿ: ಡಯಾಬಿಟಿಸ್ ಇರುವವರು ಅಧಿಕ ತೂಕವಿದ್ದರೆ ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಹಿಡಿತದಲ್ಲಿಡುವುದು ಕಷ್ಟಕರವಾಗುತ್ತದೆ. ಇದು ಈಗಾಗಲೇ ಇರುವ ನಿಮಿರುವಿಕೆಯ ನಿಷ್ಕ್ರಿಯತೆಗೆ ಕಾರಣವಾಗಿ, ಅದನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಆದ್ದರಿಂದ, ಆರೋಗ್ಯಕರ ದೇಹದ ತೂಕವನ್ನು ಸಾಧಿಸುವುದು ಡಯಾಬಿಟಿಸನ್ನು ನಿರ್ವಹಿಸಲು ಮಾತ್ರವಲ್ಲದೆ, ಅದಕ್ಕೆ ಸಂಬಂಧಿಸಿದ ತೊಂದರೆಗಳನ್ನು ತಪ್ಪಿಸಲು ಸಹ ಸಹಾಯಕವಾಗಿರುತ್ತದೆ.

ಆ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಇಲ್ಲಿ ಕೆಲವು ತಂತ್ರಗಳನ್ನು ನೀಡಲಾಗಿದೆ.

  • ನಿಮ್ಮ ಔಷಧಿಗಳ ಬಗ್ಗೆ ತಿಳಿಯಿರಿ: ಇದು ನಿಮ್ಮ ಡಾಕ್ಟರ್‌ ಜೊತೆ ಮಾತನಾಡಲು ಮತ್ತೊಂದು ಕಾರಣವಾಗಬಹುದು. ನೀವು ತಿಳಿಯದೆ, ಲೈಂಗಿಕ ಅಡ್ಡಪರಿಣಾಮಗಳಿಗೆ ಕಾರಣವಾಗುವ ಔಷಧಿಗಳನ್ನು ಸೇವಿಸುತ್ತಿರಬಹುದು. ಕೆಲವು ಖಿನ್ನತೆ-ಶಮನಕಾರಿಗಳು ಅಥವಾ ರಕ್ತದೊತ್ತಡದ ಔಷಧಿಗಳು ಸಹ ಲೈಂಗಿಕ ಅಡ್ಡಪರಿಣಾಮಗಳನ್ನು ಉಂಟುಮಾಡಬಲ್ಲವು. ನಿಮ್ಮ ಡಾಕ್ಟರ್‌, ನಿಮಗೆ ಸೇವಿಸಲು ಸೂಚಿಸುವ ಔಷಧಿಗಳ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಯನ್ನು ಪಡೆಯಿರಿ.
  • ಧೂಮಪಾನ ಬಿಟ್ಟುಬಿಡಿ: ಧೂಮಪಾನ ಸೇರಿದಂತೆ ತಂಬಾಕಿನ ಬಳಕೆಯು ನಿಮ್ಮ ರಕ್ತನಾಳಗಳನ್ನು ಕಿರಿದಾಗಿಸುವುದರ ಮೂಲಕ, ರಕ್ತದ ಹರಿವಿಗೆ ತಡೆಯಾಗಿ ನಿಮಿರುವಿಕೆಯ ನಿಷ್ಕ್ರಿಯತೆಗೆ ಕಾರಣವಾಗುತ್ತದೆ ಅಥವಾ ಇರುವ ಸಮಸ್ಯೆಯನ್ನು ಉಲ್ಬಣಿಸುತ್ತದೆ. ಧೂಮಪಾನವನ್ನು ತ್ಯಜಿಸುವುದರಿಂದ ಇದರ ರೋಗಲಕ್ಷಣಗಳನ್ನು ಸುಧಾರಿಸಬಹುದು.
  • ಮಧ್ಯಪಾನಕ್ಕೆ ಮಿತಿ ಇರಲಿ: ಹೆಚ್ಚು ಮಧ್ಯ ಸೇವಿಸಿವುದು ಸಹ ನಿಮಿರುವಿಕೆಯ ನಿಷ್ಕ್ರಿಯತೆಗೆ ಒಂದು ಕಾರಣವಾಗಿದೆ. ಇದು ದೇಹದಲ್ಲಿನ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಶಿಶ್ನದ ಒಳಗೆ ಮತ್ತು ಹೊರಗೆ ರಕ್ತದ ಹರಿವಿನ ಮೇಲೆ ಇದು ಪರಿಣಾಮ ಬೀರುತ್ತದೆ. ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯನ್ನು ಸಹ ಇದು ಕುಗ್ಗಿಸುತ್ತದೆ. ಆದ್ದರಿಂದ ನಿಮ್ಮ ಮಧ್ಯಪಾನಕ್ಕೆ ಒಂದು ಮಿತಿ ಇಟ್ಟುಕೊಂಡರೆ ಒಳಿತು. ನೆನಪಿಡಿ, ನಿಮಗೆ ಕುಡಿಯಬೇಕೆನಿಸಿದಾಗ, ಅದಕ್ಕೆ ಮಿತಿ ನಿಗದಿಯಾಗಿರಲಿ. ದಿನ ಒಂದಕ್ಕೆ ಮಹಿಳೆಯರಿಗೆ ಒಂದು ಡ್ರಿಂಕ್, ಪುರುಷರಿಗೆ ಎರಡು ಡ್ರಿಂಕ್, ಸೂಕ್ತವಾಗಿದೆ. ಇದು ಯಾವಾಗಲೊ ಒಮ್ಮೆ ಸೇವಿಸುವುದಕ್ಕೆ ಇರುವ ಪ್ರಮಾಣವಷ್ಟೆ, ಪ್ರತಿದಿನಕ್ಕಲ್ಲ.
  • ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಿ: ಡಯಾಬಿಟಿಸ್ ಸ್ನೇಹಿ ಆಹಾರವನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹಿಡಿತದಲ್ಲಿಡಬಹುದು, ಇದರಿಂದ ನಿಮ್ಮ ರಕ್ತನಾಳಗಳಿಗೆ ಮತ್ತು ನರಗಳಿಗೆ ಹಾನಿಯಾಗುವ ಸಾಧ್ಯತೆ ಅಲ್ಪಮಟ್ಟದ್ದಾಗಿರುತ್ತದೆ. ಇದು ನಿಮ್ಮ ಶಕ್ತಿಯ ಮಟ್ಟ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ, ಅದರ ಮೂಲಕ ನಿಮಿರುವಿಕೆಯ ನಿಷ್ಕ್ರಿಯತೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
  • ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ: ದೈಹಿಕ ಒತ್ತಡ (ಗಾಯ ಅಥವಾ ಅನಾರೋಗ್ಯ) ಮತ್ತು ಮಾನಸಿಕ ಒತ್ತಡ (ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಅಥವಾ ಕಾರ್ಯಕ್ಷಮತೆಯ ಭಯ), ಇಂತಹ ಒತ್ತಡಗಳ ತೀವ್ರತೆ, ತಾತ್ಕಾಲಿಕ ಅಥವಾ ಶಾಶ್ವತ ನಿಮಿರುವಿಕೆಯ ನಿಷ್ಕ್ರಿಯತೆಗೆ ಕಾರಣವಾಗಬಹುದು. ಅದನ್ನು ನಿಭಾಯಿಸಲು ಒಳ್ಳೆಯ ಮಾರ್ಗವೆಂದರೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡುವುದು ಅಥವಾ ಅಗತ್ಯವಿದ್ದಾಗ ವೈದ್ಯಕೀಯ ಸಹಾಯ ಪಡೆಯುವುದು.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.