Reading Time: 2 minutes

ಇಂದಿನ ಕಾಲಮಾನದಲ್ಲಿ, ಬಳಲಿಕೆ ಹಾಗೂ ನಿಶ್ಶಕ್ತಿ ಆಗುವುದನ್ನು ನಾವು ನಿಯಮಿತವಾಗಿ ನೋಡುತ್ತಿರುತ್ತೇವೆ. ಆಗಾಗ ನಮ್ಮ ಜೀವನಶೈಲಿಯಿಂದಾಗಿ ಇಲ್ಲವೇ ನಾವು ಮಾಡುವ ಕೆಲಸದಿಂದಾಗಿ ಹೀಗಾಗುತ್ತಿದೆ ಎಂದು ತೀರ್ಮಾನಿಸುತ್ತೇವೆ. ಆದ್ದರಿಂದ, ಜನ ಅದನ್ನು ಕಡೆಗಣಿಸುತ್ತಾರೆ ಇಲ್ಲವೇ ಡಾಕ್ಟರಿಗೆ ತೋರಿಸುವಂತಹ ದೊಡ್ಡ ಸಂಗತಿಯೇನಲ್ಲ ಎಂದು ಸುಮ್ಮನಾಗುತ್ತಾರೆ. ಮೊಟ್ಟಮೊದಲಿಗೆ, ಬಳಲಿಕೆ ಹಾಗೂ ನಿಶ್ಶಕ್ತಿಯ ನಡುವೆ ವ್ಯತ್ಯಾಸವಿದೆ.

ನಿಶ್ಶಕ್ತಿ ಆದಾಗ, ಕೆಲಸ ಮಾಡಲು ಮನಸ್ಸು ಮತ್ತು ಹುರುಪು ಕಡಿಮೆಯಾಗುತ್ತದೆ. ಜೊತೆಗೆ ಬಳಲಿಕೆ ಮತ್ತು ತೂಕಡಿಕೆಯೂ ಇರುತ್ತದೆ. ನಿಶ್ಶಕ್ತಿಯನ್ನು ಸ್ಲೀಪ್‌ ಆ್ಯಪ್ನಿಯಾ, ಥೈರಾಯ್ಡ್‌ ಇಲ್ಲವೇ ಫ್ಲೂನಂತಹ ಹಲವು ರೋಗಗಳೊಂದಿಗೆ ತಳಕು ಹಾಕಬಹುದು. ಆದರೆ, ಹೃದಯ ವೈಫಲ್ಯದಿಂದ ಬಳಲುತ್ತಿರುವವರಲ್ಲಿ ಕೂಡ ಇದು ಕಾಣಿಸಿಕೊಳ್ಳಬಹುದು[1].

ಹೃದಯ ವೈಫಲ್ಯ ಉಳ್ಳವರಲ್ಲಿ, ನಿಶ್ಶಕ್ತಿಯ ಸ್ವರೂಪ ಹಾಗೂ ಇರುವಿಕೆ ಬೇರೆ ಬೇರೆಯಾಗಿರಬಹುದು. ಇದು, ಒಬ್ಬ ವ್ಯಕ್ತಿ ಔಷಧಗಳಿಗೆ ಹೇಗೆ ಸ್ಪಂದಿಸುತ್ತಾನೆ ಹಾಗೂ ಆ ಬಳಿಕದ ಚೇತರಿಕೆ ಹೇಗಿರುತ್ತದೆ ಎಂದು ಕೂಡ ತೀರ್ಮಾನಿಸಬಹುದು. ಹಾಗಾಗಿ, ನಿಶ್ಶಕ್ತಿಯ ಸ್ವರೂಪ ಹಾಗೂ ಹೃದಯ ವೈಫಲ್ಯದಲ್ಲಿ ಅದರ ಪಾತ್ರವೇನು ಎಂದು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಇದರಿಂದ, ತುಂಬ ಅಪಾಯದಲ್ಲಿರುವ ರೋಗಿಗಳನ್ನು ಪತ್ತೆಮಾಡಲು ಹಾಗೂ ಅವರ ತೊಂದರೆಯನ್ನು ಸರಿಯಾಗಿ ನಿರ್ವಹಿಸಲು ನೆರವಾಗಬಹುದು[2].

ಹೃದಯ ವೈಫಲ್ಯ ತೀರ್‍ಮಾನಿಸುವ ಅಂಶಗಳು 

ಯಾವುದರಿಂದ ಬೇಕಾದರೂ ಆಗಬಹುದಾದ ನಿಶ್ಶಕ್ತಿಯು, ಬೇರ್ಪಡಿಸದ ಹಾಗೂ ಬಹುತೇಕ ಕಡೆಗಣಿಸಲಾಗುವ ಕುರುಹು. ಹಾಗಾಗಿ, ಅದು ಇಂತಹದ್ದರಿಂದಲೇ ಆಗಿದೆ ಎಂದು ತೀರ್ಮಾನಿಸುವುದು ಕಷ್ಟದ ಕೆಲಸ.

ಆದರೆ, ಹೃದಯ ವೈಫಲ್ಯಕ್ಕೆ ತಳಕು ಹಾಕಬಹುದಾದ ಎರಡು ಪ್ರಮುಖ ಕಾರಣಗಳನ್ನು ಪತ್ತೆಮಾಡಲಾಗಿದೆ[2]:

  • ಲೋ-ಗ್ರೇಡ್‌ ಕ್ರಾನಿಕ್‌ ಹೀಮೊಡೈನಮಿಕ್ ಒತ್ತಡ (ರಕ್ತದ ಹರಿವಿನಲ್ಲಿ ತೊಂದರೆಗಳು), ಸ್ಕೆಲಿಟಲ್‌ ಮಯೋಪಥಿಯನ್ನು (ಹೆಚ್ಚುತ್ತಾ ಹೋಗುವ ಸ್ನಾಯುಗಳ ದೌರ್ಬಲ್ಯ) ಉಂಟುಮಾಡಬಹುದು. ಇದರಿಂದ ನಿಶ್ಶಕ್ತಿ ಆಗಬಹುದು ಎಂದು ಹೇಳುತ್ತಾರೆ.
  • ಬೇರೆ ಅಧ್ಯಯನಗಳು, ವ್ಯಕ್ತಿತ್ವದ ಅಂಶಗಳು, ಡಿಪ್ರೆಶನ್‌ ಇಲ್ಲವೇ ಉಸಿರಾಟದ ತೊಂದರೆಗಳನ್ನು ನಿಶ್ಶಕ್ತಿಯ ತೀರ್‍ಮಾನಿಸುವ ಅಂಶಗಳು ಎಂದು ಗುರುತಿಸಿವೆ.

ಹೃದಯ ವೈಫಲ್ಯದಲ್ಲಿ ನಿಶ್ಶಕ್ತಿ

ಹೃದಯ ವೈಫಲ್ಯ ಉಳ್ಳವರಲ್ಲಿ, ಆಗಾಗ ನಿಶ್ಶಕ್ತಿಯ ಕುರುಹು ಕಾಣಿಸಿಕೊಳ್ಳುವುದನ್ನು ನೋಡುತ್ತಿರುತ್ತೇವೆ. ಹೃದಯ ವೈಫಲ್ಯ ಮುಂದುವರಿದಂತೆಲ್ಲ, ನಿಶ್ಶಕ್ತಿಯ ಕುರುಹುಗಳು ಹೆಚ್ಚಾಗುತ್ತದೆ ಎಂಬುದು ಗೊತ್ತಿರುವ ವಿಚಾರ. ಆದರೆ, ಎಲ್ಲಾ ರೋಗಿಗಳು, ಒಂದೇ ಬಗೆಯ ಮತ್ತು ಒಂದೇ ಮಟ್ಟದ ನಿಶ್ಶಕ್ತಿ ಇಲ್ಲವೇ ತೊಂದರೆಯ ಮುಂದುವರಿಕೆಯನ್ನು ಅನುಭವಿಸುವುದಿಲ್ಲ[2].

ನಿಶ್ಶಕ್ತಿಯ ಕುರುಹುಗಳು

ಹೃದಯ ವೈಫಲ್ಯ ಉಳ್ಳವರಲ್ಲಿ ಕಾಣಿಸುವ ಹಲವು ಕುರುಹುಗಳು ನಿಶ್ಶಕ್ತಿಗೆ ತಳಕು ಹಾಕಿಕೊಂಡಿವೆ. ಅವುಗಳಲ್ಲಿ ಕೆಲವು ಹೀಗಿವೆ[1]:

  • ರೋಗನಿರೋಧಕ ಶಕ್ತಿಯ ಕೊರತೆ
  • ಎದೆಬಡಿತ, ಜೀರ್ಣಕ್ರಿಯೆ, ಉಸಿರಾಟ ಮುಂತಾದ ನಿಮ್ಮ ಹಿಡಿತದಲ್ಲಿ ಇಲ್ಲದ ದೇಹದ ಕೆಲಸಗಳಲ್ಲಿ ಬದಲಾವಣೆ
  • ಇರುವ ಜಾಗ ಬದಲಾಯಿಸಿದಾಗ ಎದೆಬಡಿತದಲ್ಲಾಗುವ ಬದಲಾವಣೆಗಳು, ಉದಾ: ಕುಳಿತಲ್ಲಿಂದ ಎದ್ದು ನಿಂತುಕೊಳ್ಳುವುದು
  • ಬಾಗಿದಾಗ, ರಕ್ತದೊತ್ತಡ ಕಡಿಮೆಯಾಗುವುದು

ಹೃದಯ ವೈಫಲ್ಯದಲ್ಲಿ ನಿಶ್ಶಕ್ತಿಯ ಮೇಲೆ ಪ್ರಭಾವ ಬೀರುವ ಅಂಶಗಳು

ನಿಶ್ಶಕ್ತಿ ಹಾಗೂ ಹೃದಯ ವೈಫಲ್ಯದಲ್ಲಿ ಅದರ ಬಿರುಸನ್ನು ತೀರ್ಮಾನಿಸುವ ಹಲವು ಅಂಶಗಳನ್ನು ಕಂಡುಹಿಡಿಯಲಾಗಿದೆ. ಇವುಗಳಲ್ಲಿ ಕೆಲವೆಂದರೆ, ಸೂಚಿಸಿದ ಔಷಧ, ಒಟ್ಟಾರೆ ಆರೋಗ್ಯ ಹಾಗೂ ವ್ಯಾಯಾಮ ಮಾಡಲು ಶಕ್ತಿ, ಜೊತೆಗೆ ಇರುವ ಬೇರೆ ತೊಂದರೆಗಳು ಹಾಗೂ ನೀವು ಗಂಡೋ ಹೆಣ್ಣೋ ಎನ್ನುವುದು[2].

ನಿಶ್ಶಕ್ತಿ ಹಾಗೂ ಹೃದಯ ವೈಫಲ್ಯ – ಸಂಬಂಧ

ಹೃದಯ ವೈಫಲ್ಯಕ್ಕೆ ಸಂಬಂಧಿಸಿದ, ಅವಿತಿರುವ, ಬಗೆಹರಿಯದ ತೊಂದರೆಗಳಲ್ಲಿ, ನಿಶ್ಶಕ್ತಿ ಕೂಡ ಒಂದು[2]. ಹೃದಯ ವೈಫಲ್ಯವು, ಕಳಪೆ ಗುಣಮಟ್ಟದ ಬದುಕಿನೊಂದಿಗೆ ತಳಕು ಹಾಕಿಕೊಂಡಿದೆ ಹಾಗೂ ಅದಕ್ಕೆ ನಿಶ್ಶಕ್ತಿಯ ಕೊಡುಗೆ ಕೂಡ ಇದೆ[3]. ದೇಹದ ಎಲ್ಲಾ ಅಂಗಾಂಶಗಳಿಗೆ ಸಾಕಷ್ಟು ರಕ್ತವನ್ನು ಪಂಪ್‌ ಮಾಡಲು ಹೃದಯ ಸೋಲುತ್ತಿರುವುದರಿಂದ, ಕೆಲವು ಅಂಗಗಳಿಗೆ ರಕ್ತವನ್ನು ತಲುಪಿಸದೆ, ಅದರಲ್ಲೂ ವಿಶೇಷವಾಗಿ ಕೈಕಾಲುಗಳ ಸ್ನಾಯುಗಳಿಗೆ ಹರಿಯದೆ, ರಕ್ತವನ್ನು ಹೃದಯ ಮತ್ತು ಮೆದುಳಿಗೆ ಹರಿಸಲಾಗುತ್ತದೆ. ಇದರಿಂದ ಬಳಲಿಕೆ ಆದಂತೆ ಅನಿಸಿ, ಮೆಟ್ಟಿಲು ಹತ್ತುವುದು ಇಲ್ಲವೇ ನಡೆಯುವಂತಹ ದೈನಂದಿನ ಚಟುವಟಿಕೆಗಳನ್ನು ಮಾಡಲು ವ್ಯಕ್ತಿಗೆ ತೊಡಕಾಗುತ್ತದೆ[4].

ಸಾಮಾನ್ಯವಾಗಿ, ನಿಶ್ಶಕ್ತಿಯ ಮಟ್ಟಗಳು ಕಡಿಮೆ ಇದ್ದಾಗ, ರೋಗಿಗಳು ತುಂಬ ಕಡಿಮೆ ತೊಂದರೆಗಳೊಂದಿಗೆ ಇಲ್ಲವೇ ಯಾವುದೇ ಆರೋಗ್ಯ ತೊಂದರೆಗಳಿಲ್ಲದೆ ಒಳ್ಳೆಯ ಆರೋಗ್ಯ ಕಾಪಾಡಿಕೊಂಡಿರುತ್ತಾರೆ ಎಂದು ತಿಳಿದುಬಂದಿದೆ[2].

ಹೃದಯ ವೈಫಲ್ಯದೊಂದಿಗೆ ಪ್ರಮುಖವಾಗಿ ತಳಕು ಹಾಕಿಕೊಂಡಿರುವ ಕುರುಹುಗಳಲ್ಲಿ ನಿಶ್ಶಕ್ತಿ ಒಂದಾಗಿದೆ. ಇಲ್ಲಿಯವರೆಗೆ ನಿಮಗೆ ಯಾವುದೇ ಹೃದ್ರೋಗಗಳು ಇಲ್ಲದಿದ್ದು, ಆದರೆ ಉಸಿರಾಟದ ತೊಂದರೆ ಇಲ್ಲವೇ ಪಾದ, ಹಿಮ್ಮಡಿ ಗಂಟುಗಳಲ್ಲಿ ಊತದ ಜೊತೆಗೆ ನಿಶ್ಶಕ್ತಿಯ ಅನುಭವವಾದರೆ, ನೀವು ನಿಮ್ಮ ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಏಕೆಂದರೆ ಇವು ಹೃದಯ ವೈಫಲ್ಯದ ಸಾಮಾನ್ಯ ಕುರುಹುಗಳಾಗಿವೆ[4].

ಈ ಎರಡರ ನಂಟನ್ನು ನೋಡಿದ ಬಳಿಕ, ಒಟ್ಟೊಟ್ಟಿಗೆ ಇರುವ ಈ ಎರಡೂ ತೊಂದರೆಗಳನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯುವುದೇ ಸವಾಲಿನ ಕೆಲಸ. ಹೃದಯ ವೈಫಲ್ಯ ಒಂದರಿಂದಲೇ ನಿಶ್ಶಕ್ತಿ ಆಗುತ್ತಿದೆಯೇ, ಇಲ್ಲವೇ ಮತ್ತೊಂದು ತೊಂದರೆಯಿಂದ ಹೀಗಾಗುತ್ತಿರಬಹುದೇ? ನಿಮಗೆ ಅರ್ಥಮಾಡಿಸಲು ಹಾಗೂ ನಿಮ್ಮ ನಿಶ್ಶಕ್ತಿಯನ್ನು ಚೆನ್ನಾಗಿ ನಿರ್ವಹಿಸುವಲ್ಲಿ ನೆರವಾಗಲು, ನಿಮ್ಮ ಡಾಕ್ಟರನ್ನು ಕಾಣಿರಿ.

References:

  1. Nelesen R, Dar Y, Thomas K, Dimsdale JE. The Relationship Between Fatigue and Cardiac Functioning. Archives of Internal Medicine [Internet]. 2008 May 12 [cited 2019 Jul 8];168(9):943. Available from: https://jamanetwork.com/journals/jamainternalmedicine/fullarticle/414212
  2. Smith ORF, Kupper N, de Jonge P, Denollet J. Distinct trajectories of fatigue in chronic heart failure and their association with prognosis. European Journal of Heart Failure [Internet]. 2010 Aug [cited 2019 Dec 7];12(8):841–8. Available from: https://onlinelibrary.wiley.com/doi/full/10.1093/eurjhf/hfq075
  3. 6.Drexler, M.D H, Coats, M.D AJS. Explaining Fatigue in Congestive Heart Failure. Annual Review of Medicine [Internet]. 1996 Feb [cited 2020 Apr 26];47(1):241–56. Available from: https://www.annualreviews.org/doi/abs/10.1146/annurev.med.47.1.241
  4. American Heart Association. Warning signs of heart failure [Internet]. [updated 2018 Feb 13; cited 2020 Jan 16]. Available from: https://www.heart.org/HEARTORG/Conditions/HeartFailure/WarningSignsforHeartFailure/-Warning-Signs-for-Heart-Failure_UCM_002045_Article.jsp

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.