Reading Time: 2 minutes

ಇಂದು ಹಲವಾರು ವೈದ್ಯರು ಕೊಲೆಸ್ಟ್ರಾಲ್ ಸಮಸ್ಯೆಯಿರುವ ರೋಗಿಗಳಿಗೆ ಸ್ಟ್ಯಾಟಿನ್ ಅನ್ನು ಸೂಚಿಸುತ್ತಾರೆ. ಹೃದಯಾಘಾತ ಮತ್ತು ಪಾರ್ಶ್ವವಾಯುಗಳ ಅಪಾಯವನ್ನು ಕಡಿಮೆ ಮಾಡಲು ಸ್ಟ್ಯಾಟಿನ್ ಹೆಸರುವಾಸಿಯಾಗಿದೆ. ಆದಾಯೂ  ಕೆಲವೊಮ್ಮೆ ರೋಗಿಗಳು ಔಷಧಿಗಳನ್ನು ಏಕೆ ತೆಗೆದುಕೊಳ್ಳಬೇಕು ಎಂದು ಕೇಳಬಹುದು – “ಆಹಾರ ಮತ್ತು ವ್ಯಾಯಾಮದಿಂದ ಕೊಲೆಸ್ಟ್ರಾಲ್ ಅನ್ನು ಏಕೆ ನಿಯಂತ್ರಿಸಬಾರದು?” ಎಂದು ಪ್ರಶ್ನಿಸಬಹುದು. ಸ್ಟ್ಯಾಟಿನ್ ಗಳೊಂದಿಗೆ  ಸಂಭವಿಸಬಹುದಾದ ಸ್ನಾಯು ಸಮಸ್ಯೆಗಳು ಮತ್ತು ಮಧುಮೇಹದ ಅಪಾಯಗಳ ಬಗ್ಗೆ ಇವರು ಚಿಂತಿತರಾಗಿದ್ದಾರೆ. ಹೀಗಾಗಿ ಈ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯದ ಮತ್ತಷ್ಟು ತೊಂದರೆಗಳನ್ನು ತಪ್ಪಿಸುವಲ್ಲಿ ಸ್ಟ್ಯಾಟಿನ್ ಮತ್ತು ಅವುಗಳ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.[1]

ಸ್ಟ್ಯಾಟಿನ್ ಎಂದರೇನು?

ಸ್ಟ್ಯಾಟಿನಗಳು ರಕ್ತದಲ್ಲಿನ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬಳಸಲು ಔ ಷಧಿಗಳಾಗಿವೆ. ಅವು ರಕ್ತದಲ್ಲಿ ಇರುವ ಅನಗತ್ಯ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುವ ಮೂಲಕ ಯಕೃತ್ತಿಗೆ ಸಹಾಯ ಮಾಡುತ್ತವೆ.[1] ವಿಶ್ವಾದ್ಯಂತ ಈ ಔಷಧಿಗಳನ್ನು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಸಲುವಾಗಿ ಸಾಮಾನ್ಯವಾಗಿ ಶಿಫಾರಸ್ಸು ಮಾಡಲಾಗುತ್ತದೆ. ಈ ಮೂಲಕ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟುವ ಮೂಲಕ ರೋಗಿಗಳ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಸಾವಿನ ಪ್ರಮಾಣಗಳನ್ನು ಕಡಿಮೆ ಮಾಡುತ್ತವೆ.[2]

ಸ್ಟ್ಯಾಟಿನ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಸ್ಟ್ಯಾಟಿನ್ ಗಳು ಯಕೃತ್ತಿನಲ್ಲಿ ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿನ ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುತ್ತದೆ.[3] ಈ ಮೂಲಕ  ಪಾರ್ಶ್ವವಾಯು ಮತ್ತು ಹೃದಯಾಘಾತ ಮತ್ತು ಪರಿಧಮನಿಯ ಹೃದಯ ಕಾಯಿಲೆಯಂತಹ ಹಲವಾರು ಹೃದಯರಕ್ತನಾಳದ ತೊಂದರೆಗಳ ಸಂಭವವನ್ನು ಸ್ಟ್ಯಾಟಿನ್ ಗಳು ತಡೆಯುತ್ತವೆ. ಜೊತೆಗೆ ಸ್ಯಾಟಿನಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಆದ್ದರಿಂದ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಅತಿಯಾಗಿ ನಿರ್ಮಿಸಿದ ಸಂದರ್ಭಗಳಲ್ಲಿ ಅವುಗಳನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿವೆ.[3]

ಯಾವ ಪ್ರಮಾಣದ ಡೋಸೇಜ್ ಸಲಹೆ ನೀಡಲಾಗುತ್ತದೆ?

ಸ್ಟ್ಯಾಟಿನ್ ಗಳನ್ನು  ಸಾಮಾನ್ಯವಾಗಿ ಅವುಗಳ ಮಟ್ಟವನ್ನು ಆಧರಿಸಿ ವಿಂಗಡಿಸಲಾಗಿದೆ: ಹೆಚ್ಚಿನ ತೀವ್ರತೆ ಮತ್ತು ಕಡಿಮೆ-ತೀವ್ರತೆಯ ಸ್ಟ್ಯಾಟಿನ್ ಗಳು. ಕಡಿಮೆ-ತೀವ್ರತೆಯ ಸ್ಟ್ಯಾಟಿನ್ ಗಳನ್ನು ಸಾಮಾನ್ಯವಾಗಿ ಹೃದಯರಕ್ತನಾಳದ ಅಪಾಯದ ತೊಂದರೆಗಳಿರುವ ರೋಗಿಗಳಿಗೆ ಸೂಚಿಸಲಾಗುತ್ತದೆ, ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಹೃದಯರಕ್ತನಾಳ ರೋಗದ ಇತಿಹಾಸವನ್ನು ಹೊಂದಿರುವ ರೋಗಿಗಳಿಗೆ ಹೆಚ್ಚಿನ-ತೀವ್ರತೆಯ ಸ್ಟ್ಯಾಟಿನ್ ಗಳನ್ನು ಸೂಚಿಸಲಾಗುತ್ತದೆ.[3]

ಸ್ಟ್ಯಾಟಿನ್ ಗಳ ಪ್ರಯೋಜನಗಳು

ಸ್ಟ್ಯಾಟಿನ್ ಗಳನ್ನು ದೇಹದಲ್ಲಿ ಹೆಚ್ಚಾಗಿ ಸಹಿಸಿಕೊಳ್ಳಲಾಗುತ್ತದೆ; ಆದಾಗ್ಯೂ, ನಿಮ್ಮ ವೈದ್ಯಕೀಯ ಇತಿಹಾಸ ಮತ್ತು ಸ್ಥಿತಿಯ ಕಾರಣಗಳಿಂದಾಗಿ ಉಂಟಾಗಬಹುದಾದ ಎಲ್ಲಾ ಪ್ರಯೋಜನಗಳು ಮತ್ತು ಅಡ್ಡಪರಿಣಾಮಗಳಿಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ಮಾಡುವುದು ಅತ್ಯಗತ್ಯ. ಸ್ಟ್ಯಾಟಿನ್ ಗಳ  ಕೆಲವು ಸಾಬೀತಾದ ಪ್ರಯೋಜನಗಳು ಹೀಗಿವೆ:[4]

  • ಕಡಿಮೆ ಲಿಪಿಡ್ ಮಟ್ಟಗಳು: ದೇಹದಲ್ಲಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸ್ಟ್ಯಾಟಿನ್ ಗಳು ಅತ್ಯಂತ ಯಶಸ್ವಿ ಚಿಕಿತ್ಸಾ ವಿಧಾನಗಳಾಗಿವೆ. ವಯಸ್ಸು ಮತ್ತು ಲಿಂಗ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧಿತ ಸಮಸ್ಯೆಗಳಂತಹ ಮುಂಚಿತ ಪರಿಸ್ಥಿತಿಗಳನ್ನು ಲೆಕ್ಕಿಸದೆ, ಈಗಾಗಲೇ ಹೃದಯ ಸಂಬಂಧಿ ತೊಂದರೆಗಳನ್ನು ಹೊಂದಿರುವ ರೋಗಿಗಳಲ್ಲಿ  ಉಂಟಾಗಬಹುದಾದ ಮತ್ತಷ್ಟು ತೊಂದರೆಗಳನ್ನು ತಡೆಗಟ್ಟಲು ಸಹ ಇವು ಸಹಾಯ ಮಾಡುತ್ತದೆ.
  • ವಾಸೊಡಿಲೇಟರಿ ಪರಿಣಾಮ: ಸ್ಟ್ಯಾಟಿನ್ ಗಳು ವಾಸೋಡಿಲೇಟೇಶನ್ ಅನ್ನು ಸುಧಾರಿಸುತ್ತವೆ ಮತ್ತು  ರಕ್ತನಾಳಗಳನ್ನು ಹಿಗ್ಗಿಸಲು ಅನುವು ಮಾಡಿಕೊಡುತ್ತವೆ. ಇದು ಅಧಿಕ ರಕ್ತದೊತ್ತಡ ಮತ್ತು ಅಧಿಕ ರಕ್ತದ ಸಕ್ಕರೆ ಮಟ್ಟಗಳಂತಹ ಪರಿಸ್ಥಿತಿಗಳಲ್ಲಿ ಉಪಯುಕ್ತವಾಗಿದೆ. ಇದರಲ್ಲಿ ರಕ್ತನಾಳಗಳ ಸಾಮಾನ್ಯ ವಾಸೋಡಿಲೇಟೇಶನ್ ದುರ್ಬಲಗೊಳ್ಳುತ್ತದೆ.
  • ಉರಿಯೂತದ ಪರಿಣಾಮ: ಸ್ಟ್ಯಾಟಿನ್ ಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ.  ಇದು ಪರಿಧಮನಿಯ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
  • ಹೆಪ್ಪುಗಟ್ಟುವಿಕೆಯ ರಚನೆಯನ್ನು ತಡೆಯುತ್ತದೆ: ಸ್ಟ್ಯಾಟಿನ್ ಗಳು  ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ರಕ್ತನಾಳಗಳ ಮೂಲಕ ರಕ್ತದ ಅತ್ಯುತ್ತಮ ಹರಿವನ್ನು ಖಚಿತಪಡಿಸುತ್ತವೆ. ದೇಹದಲ್ಲಿ ಅಸ್ತಿತ್ವದಲ್ಲಿರುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಸಹ ನಾಶಪಡಿಸುತ್ತವೆ.

ಅದರ ಕೆಲವು ಅಡ್ಡಪರಿಣಾಮಗಳು ಯಾವುವು?

ಸ್ಟ್ಯಾಟಿನ್ ಬಳಕೆಯು ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ.  ಸ್ಟ್ಯಾಟಿನ್ ಬಳಸಿದ ರೋಗಿಗಳಲ್ಲಿ ಕಂಡು ಬರುವ ಕೆಲವು ಅಡ್ಡ ಪರಿಣಾಮಗಳು:[2]

  • ಮೈಯಾಲ್ಜಿಯಾ ಮತ್ತು ಮಯೋಸಿಟಿಸ್‌ನಂತಹ ಸ್ನಾಯು ಸಂಬಂಧಿತ ಕಾಯಿಲೆಗಳು
  • ಯಕೃತ್ತಿನ ಅಪಸಾಮಾನ್ಯ ಕ್ರಿಯೆ
  • ಮಧುಮೇಹ
  • ಮೂತ್ರಪಿಂಡದ ಸಮಸ್ಯೆಗಳು
  • ಭಾವನೆಗಳ ಏರುಪೇರು  ಮತ್ತು ಕಿರಿಕಿರಿಯಂತಹ ನರವೈಜ್ಞಾನಿಕ ಸಮಸ್ಯೆಗಳು
  • ಡ್ರಗ್ ಸಂವಹನ

ಸ್ಟ್ಯಾಟಿನ್ ‍ಗಳೊಂದಿಗೆ ನಿರ್ವಹಿಸುವುದು

ಕೊಲೆಸ್ಟ್ರಾಲ್-ಸಂಬಂಧಿತ ಸಮಸ್ಯೆಗಳಿಗೆ ನಿರ್ದಿಷ್ಟ ರೀತಿಯ ಆರೈಕೆಯ ಅಗತ್ಯವಿರುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಸ್ಟ್ಯಾಟಿನ್ ಆಗಿರಲಿ ಅಥವಾ ಇಲ್ಲದಿರಲಿ, ಕೊಲೆಸ್ಟ್ರಾಲ್ ಸಮಸ್ಯೆಯಿರುವವರು ಈ ಕೆಳಗಿನಂತೆ ಮಾಡಬೇಕು:[3]

  • ವ್ಯಾಯಾಮ ಮಾಡಿ ಮತ್ತು ತೂಕವನ್ನು ಕಾಪಾಡಿಕೊಳ್ಳಿ
  • ಆಲ್ಕೊಹಾಲ್ ಸೇವನೆಯನ್ನು ಮಿತಿಗೊಳಿಸಿ
  • ಸರಿಯಾದ ಪ್ರಮಾಣದಲ್ಲಿ  ಸರಿಯಾದ ಆಹಾರವನ್ನು ಸೇವಿಸಿ
  • ಧೂಮಪಾನ ತ್ಯಜಿಸಿ

ಸ್ಟ್ಯಾಟಿನ್ ಗಳ  ನಿಯಮಿತ ಸೇವನೆ ಮತ್ತು  ಕೆಲವು ಉತ್ತಮ ಆಯ್ಕೆಗಳು ಆರೋಗ್ಯಕರ, ಪೂರ್ಣ ಜೀವನವನ್ನು ನಡೆಸಲು ನಿಮಗೆ ಸಹಾಯ ಮಾಡುತ್ತದೆ!

ಉಲ್ಲೇಖಗಳು:

  1. US Food & Drug Administration. Controlling cholesterol with statins [Internet]. [Updated 2017 Feb 16; cited 2019 Dec 6]. Available from: https://www.fda.gov/consumers/consumer-updates/controlling-cholesterol-statins.
  2. Ramkumar S, Raghunath A, Raghunath S. Statin therapy: review of safety and potential side effects. Acta Cardiol Sin. 2016 Nov;32(6):631-639. doi: 10.6515/ACS20160611A.
  3. Public Health England. Health matters: what you need to know about statins [Internet]. [updated 2019 Mar 18; cited 2019 Dec 6]. Available from: https://publichealthmatters.blog.gov.uk/2019/03/18/health-matters-what-you-need-to-know-about-statins/.
  4. Pinal-Fernandez I, Casal-Dominguez M, Mammen AL. Statins: pros and cons. Med Clin (Barc). 2018 May 23;150(10):398-402. doi: 10.1016/j.medcli.2017.11.030.
  5. Alberts B, Johnson A, Lewis J, et al. Molecular biology of the cell. 4th ed. [Internet]. 2002 [cited 2019 Dec 6]. Available from: https://www.ncbi.nlm.nih.gov/books/NBK26848/.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.