Reading Time: 2 minutes

ಹೈಪರ್‌ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡ, ಇದು ಹಲವು ಸಂದರ್ಭಗಳಲ್ಲಿ ಜೀವಾವಧಿಯ ರೋಗವಾಗಿರುತ್ತದೆ. ಹಾಗಾಗಿ ಇದಕ್ಕೆ ಪ್ರತಿ ದಿನ ಮಾತ್ರೆಗಳು ಬೇಕಾಗುತ್ತವೆ. ರಕ್ತದೊತ್ತಡ ಸ್ಥಿರವಾಗಿ ಚೆನ್ನಾಗಿದ್ದಿದ್ದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವುದು ಬೇಕಾಗಿರುತ್ತಿರಲಿಲ್ಲ ಎಂದೋ, ಅಥವಾ ಈ ಔಷಧಿಗಳ ಅಡ್ಡ ಪರಿಣಾಮಗಳಿಂದಲೋ, ಅಥವಾ ಮಾತ್ರೆಯ ಬೆಲೆಯಿಂದಲೋ, ಹಲವು ರೋಗಿಗಳಿಗೆ ಇದು ಕಿರಿಕಿರಿ ಉಂಟು ಮಾಡುತ್ತದೆ. ಏನೇ ಇರಲಿ, ಡಾಕ್ಟರ್ ಅನುಮತಿಯಿಲ್ಲದೆ ಯಾವುದೇ ಕಾರಣಕ್ಕೂ ಮಾತ್ರೆ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಡಿ.

ನಿಮ್ಮ ಮಾತ್ರೆಯೇ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತಿರುವುದು, ಇದು ನಿಮ್ಮ ಅರಿವಿಗೆ ಬರದಿರಬಹುದು. ನೀವು ಚೆನ್ನಾಗಿ ತಿನ್ನುತ್ತಾ, ಚುರುಕಾಗಿರುತ್ತಾ ಮತ್ತಿತರ ನಾನ್-ಫಾರ್ಮಾಕೊಲಾಜಿಕಲ್ ವಿಧಾನಗಳಿಂದ ಇದನ್ನು ಮತ್ತಷ್ಟು ನಿಯಂತ್ರಣದಲ್ಲಿಟ್ಟಿರಬಹುದು. ಆದರೆ, ಆಂಟಿಹೈಪರ್ಟೆನ್ಸಿವ್ ಥೆರಪಿಯ ಜೀವಾಳ ನಿಮ್ಮ ಮಾತ್ರೆಯೇ.

ತೊಡಕುಗಳು

ನೀವು ಒಂದು ಡೋಸ್ ತೆಗೆದುಕೊಳ್ಳುವುದನ್ನು ತಪ್ಪಿದರೆ ಏನೂ ಆಗದೆ ಇರುವ ಸಾಧ್ಯತೆ ಇದೆ. ನೀವು ಸ್ವಲ್ಪ ತಲೆ ಸುತ್ತಿದಂತೆ ಆಗಬಹುದು ಇಲ್ಲವೇ ಸ್ವಲ್ಪ ‘ನಶೆ’ಯನ್ನು ಅನುಭವಿಸಬಹುದು.

ಒಂದಕ್ಕಿಂತ ಹೆಚ್ಚು ಡೋಸ್ ತೆಗೆದುಕೊಳ್ಳುವುದನ್ನು ತಪ್ಪಿಸಿದರೆ, ನೀವು ತಲೆನೋವು, ವಾಕರಿಕೆ, ಹೆದರಿಕೆ, ಹೆಚ್ಚಿದ ಎದೆಬಡಿತ, ಇತ್ಯಾದಿಗಳನ್ನು ಅನುಭವಿಸಬಹುದು. ಇದು ಹೆಚ್ಚಾಗಿ, ಕೊನೆಯ ಡೋಸ್ ನಂತರದ 1.5 ಇಂದ 3 ದಿನಗಳ ನಡುವೆ ಕಂಡುಬರಬಹುದು. ಕೆಲವೊಮ್ಮೆ ಅದಕ್ಕೂ ಮೊದಲು ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ, ರಿಬೌಂಡ್ ಹೈಪರ್‌ಟೆನ್ಶನ್ ಎಂಬ ವಿದ್ಯಮಾನ ಕಂಡುಬರಬಹುದು.(1,2) ಹಾಗಂದ್ರೆ ನಿಮ್ಮ ರಕ್ತದೊತ್ತಡ, ನೀವು ಟ್ರೀಟ್ಮೆಂಟ್ ಶುರು ಮಾಡುವ ಮೊದಲಿದ್ದ ಮಟ್ಟಕ್ಕೆ ತಕ್ಷಣವೇ ಏರಿಬಿಡಬಹುದು – ಅಥವಾ ಅದಕ್ಕೂ ಹೆಚ್ಚು! ಇದು ಆ್ಯಂಜಿನಾಗೂ (ಎದೆನೋವಿಗೂ) ಎಡೆಮಾಡಿಕೊಡಬಹುದು.

ನೀವು ಒಂದಕ್ಕಿಂತ ಹೆಚ್ಚು ಮಾತ್ರೆ ತೆಗೆದುಕೊಳ್ಳುತ್ತಾ ಇದ್ದು, ಅಷ್ಟೂ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ, ಮೇಲೆ ತಿಳಿಸಿದ ಲಕ್ಷಣಗಳು ಇನ್ನೂ ತೀವ್ರವಾಗುತ್ತವೆ. ಬೀಟಾ ಬ್ಲಾಕರ್ (1) ತೆಗೆದುಕೊಳ್ಳುವುದನ್ನು ಹಠಾತ್ತನೆ ನಿಲ್ಲಿಸಿದವರಿಗೆ ಆ್ಯಂಜಿನಾ, ಹೃದಯಾಘಾತ, ಮತ್ತು ಸಾವು ಕೂಡ ಸಂಭವಿಸಿದೆ.

ಇನ್ನೊಂದೆಡೆ, ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸದಿದ್ದರೂ ತುಂಬಾ ಡೋಸ್‌ಗಳನ್ನು ತಪ್ಪುವ ಜನರಿಗೆ ಹೆಚ್ಚಿನ ಅಪಾಯ ಎದುರಾಗುವ ಸಾಧ್ಯತೆ ಇದೆ. ಅವರು ಆಗಾಗ ಹೈಪರ್‌ಟೆನ್ಶನ್ ಸಂಬಂಧಿತ ತೊಡಕುಳಿಗೆ (ವಿಶೇಷವಾಗಿ ಹೃದಯ ವೈಫಲ್ಯಕ್ಕೆ) ಆಸ್ಪತ್ರೆಗೆ ಹೋಗುತ್ತಾರೆ ಎನ್ನುವುದನ್ನು ಒಂದು ಅಧ್ಯಯನ(3) ತೋರಿಸಿದೆ. ಅಪರೂಪದ ಸಂದರ್ಭಗಳಲ್ಲಿ ಕೆಲವರು ಮಿನಿ ಸ್ಟ್ರೋಕ್ (ಲಘು ಆಘಾತ) ಮತ್ತು/ಅಥವಾ ದೃಷ್ಟಿ ನಷ್ಟವನ್ನೂ ಅನುಭವಿಸಿದ್ದಾರೆ.

ನೀವು ಒಂದು ಡೋಸ್ ತೆಗೆದುಕೊಳ್ಳುವುದನ್ನು ತಪ್ಪಿಸಿದಾಗ ಏನು ಮಾಡಬೇಕು

ನೀವು ಒಂದು ಡೋಸ್‌ ತೆಗೆದುಕೊಳ್ಳುವುದನ್ನು ತಪ್ಪಿಸಿದರೆ ಅದಕ್ಕೆ ಏನು ಮಾಡಬೇಕು ಎನ್ನುವುದು, ನೀವು ಯಾವಾಗ ಅದನ್ನು ನೆನಪು ಮಾಡಿಕೊಳ್ಳುತ್ತೀರಾ ಎನ್ನುವುದರ ಮೇಲೆ ನಿಂತಿದೆ. ಸಾಮಾನ್ಯವಾಗಿ, ನೀವು 10 ಗಂಟೆಗಳ ಒಳಗೆ ನೆನಪು ಮಾಡಿಕೊಂಡರೆ, ನೀವು ಮಾತ್ರೆಯನ್ನು ತೆಗೆದುಕೊಂಡು ಮುಂದಿನ ಮಾತ್ರೆಯನ್ನು ಅದರ ಸಮಯಕ್ಕೆ ತೆಗೆದುಕೊಳ್ಳಬಹುದು. ಆದರೆ ನೀವು ತುಂಬಾ ತಡವಾಗಿ ನೆನಪು ಮಾಡಿಕೊಂಡರೆ, ನಿಮ್ಮ ಮುಂದಿನ ಮಾತ್ರೆಯ ಸಮಯಕ್ಕೆ ಕಾದು ಒಂದೇ ಮಾತ್ರೆ ತೆಗೆದುಕೊಳ್ಳಿ. ತಪ್ಪಿಹೋದದ್ದನ್ನು ಸರಿದೂಗಿಸಲು ಒಮ್ಮೆಯೇ ಎರಡು ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ! ಅದು ನಿಮ್ಮ ರಕ್ತದೊತ್ತಡವನ್ನು ತೀರಾ ಕಡಿಮೆ‌ ಮಾಡಬಹುದು.

ಮಾತ್ರೆ ತೆಗೆದುಕೊಳ್ಳುವುದನ್ನು ತಪ್ಪಸಿಕೊಳ್ಳದೇ ಇರುವುದು ಹೇಗೆ

ಹೈಪರ್ಟೆನ್ಶನ್ ಇರುವ ಅರ್ಧಕ್ಕೂ ಹೆಚ್ಚಿನ ರೋಗಿಗಳು, ವರ್ಷದಲ್ಲಿ ಒಂದು ಡೋಸ್‌ನ್ನಾದರೂ ತಪ್ಪಿಸಿರುತ್ತಾರೆ.(4) ಆ ಡೋಸ್‌ ತಪ್ಪಿಸಲು ನಿಮ್ಮ ಕಾರಣವೇನು? ಮಾತ್ರೆಯ ಬೆಲೆಯೇ ಅಥವಾ ಅಡ್ಡ ಪರಿಣಾಮಗಳೇ? ಏನೇ ಇದ್ದರೂ ನಿಮ್ಮ ಡಾಕ್ಟರ್ ಜೊತೆ ಮಾತನಾಡಿ. ಮಾರುಕಟ್ಟೆಯಲ್ಲಿ ಹೈಪರ್ಟೆನ್ಶನ್‌ಗೆ ತುಂಬಾ ಔಷಧಿಗಳು ಸಿಗುತ್ತವೆ ಮತ್ತು ಬದಲಿಗೆ ನಿಮಗೆ ಹೊಂದುವ ಬೇರೊಂದು ಮೆಡಿಕೇಶನ್‌ಗೆ ಬದಲಾಗಲು ಸಾಧ್ಯವಿರುತ್ತದೆ.

References:

  1. Reidenberg MM. Drug discontinuation effects are part of the pharmacology of a drug. Journal of Pharmacology and Experimental Therapeutics. 2011;339(2):324-8.
  2. Corrao G, Rea F, Ghirardi A, Soranna D, Merlino L, Mancia G. Adherence with antihypertensive drug therapy and the risk of heart failure in clinical practice. Hypertension. 2015;66(4):742-9.
  3. Karachalios GN, Charalabopoulos A, Papalimneou V, Kiortsis D, Dimicco P, Kostoula OK, et al. Withdrawal syndrome following cessation of antihypertensive drug therapy. International journal of clinical practice. 2005;59(5):562-70.
  4. De Leeuw PW, Fagard R, Kroon AA. The effects of missed doses of amlodipine and losartan on blood pressure in older hypertensive patients. Hypertension Research. 2017;40(6):568.

Loved this article? Don't forget to share it!

Disclaimer: The information provided in this article is for patient awareness only. This has been written by qualified experts and scientifically validated by them. Wellthy or it’s partners/subsidiaries shall not be responsible for the content provided by these experts. This article is not a replacement for a doctor’s advice. Please always check with your doctor before trying anything suggested on this article/website.