ಇದೊಂದು ಪ್ರೋಟೀನ್ ಆಗಿದ್ದು ಗೋಧಿ, ರೈ, ಸ್ಪೆಲ್ಟ್ ಮತ್ತು ಬಾರ್ಲೆಯಂತಹ ಧಾನ್ಯಗಳಲ್ಲಿ ಕಂಡುಬರುತ್ತದೆ. ಆದರೆ ಅದು ಏನು ಮಾಡುತ್ತದೆ? ಒಂದು ಪೊಟ್ಟಣ ಗೋಧಿ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ನೀರನ್ನು ಹಾಕಿದಾಗ, ಅದು ಅಂಟಿನ ತರಹದ ಮಂದತೆಯನ್ನು ಪಡೆಯುತ್ತದೆ. ಗ್ಲುಟನ್‌ನಿಂದಾಗಿ ಈ ಹಿಗ್ಗು ಗುಣವನ್ನು ಉಂಟಾಗುತ್ತದೆ. ಚಪಾತಿ, ಪುರಿಯಂತಹ ರೊಟ್ಟಿಗಳನ್ನು ಸುಲಭವಾಗಿ ಲಟ್ಟಿಸಲು ಗ್ಲುಟನ್ ಕೂಡ ಕಾರಣವಾಗಿದೆ. ಗ್ಲುಟನ್ 2 ಬಗೆಯ ಪ್ರೋಟೀನ್‌ಗಳನ್ನು ಹೊಂದಿರುತ್ತದೆ: ಗ್ಲುಟೆನಿನ್ ಮತ್ತು ಗ್ಲಿಯಾಡಿನ್. ಗ್ಲಿಯಾಡಿನ್ ಕೆಟ್ಟ ಪರಿಣಾಮಗಳಿಂದ ಕೂಡಿರುತ್ತದೆ.
ಬಹುತೇಕರು ಗ್ಲುಟೇನನ್ನು ಸಂಪೂರ್ಣವಾಗಿ ಸೇವಿಸಲು ಸಮರ್ಥರಿರುತ್ತಾರೆ. ಆದಾಗ್ಯೂ, ಕೆಲವರಿಗೆ ಗ್ಲಿಯಾಡಿನ್ ಆಗಿ ಬರುವುದಿಲ್ಲ. ಕಾರಣ ಸಿಲಿಯಾಕ್ ಕಾಯಿಲೆ ಅಥವಾ ಗ್ಲುಟೆನ್ ಸೆನ್ಸಿಟಿವಿಟಿ ಎಂಟರೊಪತಿ ಎಂಬ ಸ್ವಯಂ-ಪ್ರತಿರೋಧಕ ಸ್ಥಿತಿ.
ಸಿಲಿಯಾಕ್ ಕಾಯಿಲೆ
ಈ ಸ್ಥಿತಿಯಲ್ಲಿ, ಗ್ಲುಟನ್ ವಿರುದ್ಧ ಪ್ರತಿಕಾಯಗಳು ರೂಪುಗೊಂಡು, ಕರುಳಿನ ಗೋಡೆಗಳಿಗೆ ಹಾನಿ ಮಾಡುತ್ತವೆ. ಇದು ಇತರ ಪೋಷಕಾಂಶಗಳ ಕೆಟ್ಟ ಹೀರಿಕೊಳ್ಳುವಿಕೆಗೆ ಮತ್ತು ತೀವ್ರತರವಾದ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಅಜೀರ್ಣ, ವಾಯು ಅಥವಾ ಅನಿಲ, ಅತಿಸಾರ, ಮಲಬದ್ಧತೆ, ಗಂದೆಗಳು, ರಕ್ತಹೀನತೆ, ತೂಕ ನಷ್ಟ ಮತ್ತು ದುರ್ವಾಸನೆ ಬೀರುವ ಮಲ ಇವು ಸಿಲಿಯಾಕ್ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ.
ಕಿರಿಕಿರಿಯುಂಟುಮಾಡುವ ಕರುಳಿನ ಸಿಂಡ್ರೋಮ್‌ನಂತಹ ಇತರ ಸ್ಥಿತಿಗಳಲ್ಲಿ, ನಾನ್-ಸಿಲಿಯಾಕ್ ಗ್ಲುಟನ್ ಸೆನ್ಸಿಟಿವಿಟಿ, ಉರಿಯೂತದ ಕರುಳಿನ ಕಾಯಿಲೆ (ಕ್ರೋನ್ಸ್ ಕಾಯಿಲೆ ಮತ್ತು ಅಲ್ಸರೇಟಿವ್ ಕೊಲೈಟಿಸ್) ಸಹ ಗ್ಲುಟೆಸ್ ಸೆನ್ಸಿಟಿವಿಟಿಗೆ ಗುರಿಯಾಗುತ್ತದೆ. ಈ ಸ್ಥಿತಿಗಳಿಗಾಗಿ, ಗ್ಲುಟನ್ ಅನ್ನು ಆರಂಭದಲ್ಲಿ ತಪ್ಪಿಸಿ ನಂತರದಲ್ಲಿ ಸೈರಣೆಯ ಆಧಾರದ ಮೇಲೆ ಕೆಲ ಪ್ರಮಾಣದಲ್ಲಿ ಮತ್ತೆ ನೀಡಲಾಗುತ್ತದೆ.
ಈಗ ಇದು ಸುಲಭ ಸಾಧ್ಯವೆಂದೆನಿಸಬಹುದಾದರೂ ಗ್ಲುಟನ್‍ನ್ನು ತಪ್ಪಿಸುವುದು ಸವಾಲಿನ ಕೆಲಸವಾಗಿದೆ. ಯಾಕೆಂದರೆ, ಪ್ರತಿದಿನ ತಿನ್ನಲು ಸಿದ್ಧವಾಗಿರುವ ಬ್ರೆಡ್ಡು, ಬಿಸ್ಕೆಟ್‌ನಂತಹ ತಿಂಡಿಗಳಲ್ಲಿ ಈ ಗ್ಲುಟನ್ ಇದ್ದೇ ಇರುತ್ತದೆ. ಇದು ಸೂಪ್ ಮತ್ತು ಹುರಿದ ಆಹಾರದಂತಹ ಪದಾರ್ಥಗಳಲ್ಲೂ ಇರುತ್ತದೆ. ಆದ್ದರಿಂದ ಈ ಆಹಾರಗಳನ್ನು ತಿನ್ನುವ ಮೊದಲು ಅವುಗಳಲ್ಲಿರುವ ಪದಾರ್ಥಗಳ ಪಟ್ಟಿಯನ್ನು ಚೆನ್ನಾಗಿ ಪರೀಕ್ಷಿಸಿ ನೋಡುವುದು ಒಳ್ಳೆಯದು.
ಸಾಮಾನ್ಯ ಗೋಧಿ ಹಿಟ್ಟಿನ ಬದಲು ಅಮರಂಥ್ (ರಾಜಗೀರ) ನಂತಹ ಹುಸಿ ಧಾನ್ಯಗಳನ್ನು ಬಳಸಿ ಗ್ಲುಟನನ್ನು ಬದಲಿಸಬಹುದು. ಚೆಸ್ಟ್‌ನಟ್ ಹಿಟ್ಟು (ಸಿಂಗದಾ ಅಟ್ಟಾ), ಗೌರ್ ಗಮ್, ಟಪಿಯೋಕಾ ಹಿಟ್ಟು (ಆರೋರೂಟ್), ಬಾಳೆ ಹಿಟ್ಟು, ತೆಂಗಿನ ಹಿಟ್ಟು, ಕಡಲೆ ಹಿಟ್ಟು (ಬೇಸನ್), ಸೋಯಾ ಹಿಟ್ಟನ್ನು ಸಹ ನೀವು ಆರಿಸಿಕೊಳ್ಳಬಹುದು. ಹಣ್ಣುಗಳು, ಬೀಜಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳಿಗೆ ಅಂಟಿಕೊಳ್ಳುವುದರಿಂದ ಗ್ಲುಟನ್ ಸಮಸ್ಯೆಗಳಿಂದ ಪಾರಾಗಲು ಸಹಾಯವಾಗುತ್ತದೆ.
ಆದ್ದರಿಂದ ಮುಂದಿನ ಬಾರಿ ನೀವು ಬ್ರೆಡನ್ನು ಖರೀದಿಸುವಾಗ, ಲೇಬಲ್ ಮೇಲೆ ಗ್ಲುಟನ್‌ಗಾಗಿ ಹಾಕಿರುವ ಪದಾರ್ಥಗಳ ಪಟ್ಟಿಯನ್ನು ಸ್ಕ್ಯಾನ್ ಮಾಡಲು ಮರೆಯಬೇಡಿ.